ಪ್ರಾಸ ಪ್ರವಾಸ ಪದ್ಯಗಳು
ನೋಡಿ ಬಂದೆವು ಕೂಡಲ ಸಂಗಮ
ಅಲ್ಲಿತ್ತು ಬಹು ಜನ ಸ್ತೋಮ||
ಮಾಡಿ ಬಂದೆವು ದೋಣಿ ಪ್ರಯಾಣ
ಅದರಿಂದ ಸಿಕ್ಕಿತ್ತು ಬಹು ತ್ರಾಣ||
ಮಧ್ಯದಲ್ಲಿ ಆಗಿತ್ತು ಎಲ್ಲರಿಗೂ ತ್ರಾಸ
ಹಾಗಾಗಿ ಮಲಗಿದ್ದರು ಎಲ್ಲಾ ನಿರಾಯಾಸ||
ಗುಂಬಜಿನ ಗೋಡೆಗಳಲ್ಲಿ ಪ್ರತಿಧ್ವನಿಸುತ್ತಿತ್ತು ಮಂದಿಯ ನಿನಾದ
ಆದರವಳೆದೆಯಲ್ಲಿ ಮೂಡಿತ್ತು ಆರ್ತನಾದ||
ಆಕೆಯಲ್ಲೋ ಕೂತು ಅಳುತ್ತಿದ್ದಳು ಬಿಕ್ಕಿ ಬಿಕ್ಕಿ
ಕದಡಿತ್ತು ಅವಳ ಮನ ಕಕ್ಕಾ-ಬಿಕ್ಕಿ||
ನೊಂದಿತ್ತು ಮನ ಕಣ್ಣೀರೊರೆಸಿ-ಒರೆಸಿ
ಹೊಯ್ದಾಡಿತು ಮನ ಇನ್ನೇನನ್ನೊ ಅರಸಿ-ಅರಸಿ||
ಪಂಡರಾಪುರದ ಬೀದಿಗಳಲ್ಲಿತ್ತು ಕಸ
ಆದರೆ ಭಕ್ತರೆದೆಯಲ್ಲಿತ್ತು ಭಕ್ತಿಯ ರಸ||
ಬೇಡಿದರೆಲ್ಲರೂ ರಂಗಾ ರಂಗಾ ಎಂದು
ಅವನುಲಿದ ಸ್ವಚ್ಛಗೊಳಿಸಿ ನನ್ನೂರನೆಂದು||
ಮೋದಿಜೀಯ ಸ್ವಚ್ಛ ಭಾರತ ಅಭಿಯಾನ್
ಎಲ್ಲಾ ಕೈಜೋಡಿಸೋಣ, मेरा भारत महान|| (written on 0ct 2nd ,the scenes in Pandrapur was swachh bharath abhiyaan)
ಇದನ್ನು ಶನಿಸಿಂಗಾಪುರವೆಂದು ಕರೆವರೆಂದರು
ಸೊಗಸಾಗಿದೆ ಒಮ್ಮೆ ನೋಡಿಬರೋಣವೆಂದರು||
ಅಲ್ಲಿ ನೆಲೆಸಿದ್ದ ಶನಿ ಮಹಾತ್ಮ
ಅದ ನೋಡಿ ನಮ್ಮದಾಯಿತು ಶುದ್ಧಾತ್ಮ||
ಶನಿಕಾಟ ಕಳೆವುದೆಂದು ಹೊಯ್ದರೆಲ್ಲ ತಿಲತೈಲ
ಆದರವ ನಕ್ಕ-"ಕರ್ಮ ಸವೆಸುವವರೆಗೂ ಸಿಗದು ಫಲ" ||
ಶಿರಡಿಯ ಬೀದಿಗಳಲ್ಲಿತ್ತು ರಂಗು ರಂಗಿನಾಟಿಕೆ
ಭರದಿಂದ ಸಾಗಿತ್ತು ಭಕ್ತರ ಚಟುವಟಿಕೆ||
ಮೊಳಗುತ್ತಿತ್ತು ಘಂಟಾ-ಘೋಷ ಸಾಯಿ ಸಾಯಿ ಎಂದು
ಕಾದು ಕುಳಿತ್ತಿದ್ದರೆಲ್ಲ ಬಾಬಾನ ಕಾಕಡಾರತಿಗೆಂದು||
ಜಗಮಗಿಸುವ ಬೆಳಕಿನಲ್ಲಿ ಆಲಿಸುತ್ತಿದ್ದ ಮೌನವಾಗಿ ಕುಂತು
ಬೇಡಿದರೆಲ್ಲ ಜನ-"ಸರ್ವೇ ಜನೋ ಸುಖಿನೋಭವಂತು"||
ಪುಣೆ,ಜನರನ್ನು ಯಾಂತ್ರಿಕವಾಗಿಸಿದ ಇನ್ನೊಂದು ನಾಡು
ಕೈಗಾರಿಕೋದ್ಯಮದ ನೆಲೆ ಬೀಡು||
ಯಾಂತ್ರಿಕವಾದ ಬದುಕು,ಶರವೇಗದಲ್ಲಿರುವ ವಾಹನಗಳು
ಜನರನ್ನೇ ಕಬಳಿಸುವಂತ ಬಿಸಿಲು,ಗಗನ ಚುಂಬಿಸುವ ಕಟ್ಟಡಗಳು||
ಎಲ್ಲೆಲ್ಲೂ ಕಾಣ ಸಿಗುವವು ಪ್ರವಾಸಿ ಮಂದಿರಗಳು
ಮಾಡುವವು ಪ್ರವಾಸಿಗರನ್ನೆ "ಬಕರಾಗಳು"||
ಬಾಲಾಜಿಯ ಸನ್ನಿಧಿ ನಾರಾಯಣಪುರವೆಂದು
ಮಂದಿ ಕರೆದರು ಇದ ಚಿಕ್ಕತಿರುಪತಿಯೆಂದು||
ಜೊತೆಗೆ ನೆಲೆಸಿದ್ದರು ಪದ್ಮಾವತಿ,ಅಲುಮೇಲಮ್ಮ
ನೋಡಲು ಅತೀ ಸುಂದರವಮ್ಮ||
ಇನ್ನೀರ್ವರಿದ್ದರು ವರಾಹ,ವೇಣುಗೋಪಾಲನು
ಕೊಳಲನೂದುತ ಚಂದದಿಂದ ನಿಂದಿಹನು||
ಮಹಾಬಲೇಶ್ವರ ಪಂಚ ಲಿಂಗೇಶ್ವರ
ಐದು ನದಿಗಳ ಸಂಗಮೇಶ್ವರ||
ಇಲ್ಲಿ ಮಹಾಬಲನನ್ನು ಸಂಹಾರ ಮಾಡಿದ ಈಶ್ವರ,
ತೋರಿದ ರುದ್ರಾಕ್ಷಿಯ ಅವತಾರ||
ಇದು ಕೃಷ್ಣ,ಸರಸ್ವತಿ,ಕೊಯ್ಲ,ಸಾವಿತ್ರಿ,
ಗಾಯಿತ್ರಿ ನದಿಗಳ ಸಂಗಮದ ಧರಿತ್ರಿ||
ಹರಿವಲ್ಲಭೆಯ ತವರೂರು ಕೊಲ್ಲಾಪುರ
ಕುರುಕಲು ತಿಂಡಿ ದೊರೆವುದಿಲ್ಲಿ ತರ-ತರಾ||
ಸರ್ವಾಲಂಕೃತವಾಗಿ ನೆಲೆಸಿಹಳಿಲ್ಲಿ ಮಹಾಲಕ್ಷ್ಮಿ
ನೋಡಲು ಸಾಲದು ಎರಡು ಅಕ್ಷಿ,ಅದಕ್ಕೆ ನಾವೆ ಸಾಕ್ಷಿ||
ಬಹು ರುಚಿಕರ ಇಲ್ಲಿನ ವಡಾ-ಪಾವ್
ತಿಂದು ಪ್ರವಾಸಿಗರೆಂದರು ವಾವ್ -ವಾವ್||
ತಿಂದು ಪ್ರವಾಸಿಗರೆಂದರು ವಾವ್ -ವಾವ್||
Nice chandu
ReplyDeleteFantastic
ReplyDeleteBeautiful..👌🏻
ReplyDeleteSuper.. Keep it up chandu 😊
ReplyDeleteWell composed.
ReplyDeletewel composed,keep going
ReplyDeleteSuper putting, keep it up.
ReplyDeleteತುಂಬಾ ಚೆನ್ನಾಗಿದೆ
ReplyDelete