ಹೆಸರು: ಚಲನಾ
ವಯಸ್ಸು: 21
ತಂದೆ: ವಾಸುದೇವರಾವ್
ತಾಯಿ: ವತ್ಸಲಾ
ಊರು: ಜಂಗಮದುರ್ಗ
ಡಿಗ್ರಿ: ಬಿಎಸ್ಸಿ( ಸಿಬಿಝೆಡ್)
ಕೆಲಸ: ರಿಸೆಪ್ಶನಿಸ್ಟ್ ಟ್ರಾವೆಲರ್ಸ್ ಬುಕ್ಕಿಂಗ್ ಕಂಪನಿಯಲ್ಲಿ(ಬೆಂಗಳೂರು)
ಚಲನಾಳ ಬಯೋಡೇಟಾ ಮತ್ತು ಫೋಟೋ ನೋಡಿದ ಗಂಡಿನ ಮನೆಯವರು ಚಕಾರವೆತ್ತದೆ ಹೂ ಎಂದಿದ್ದರು. ಇನ್ನೇನು ಹುಡುಗಿ ನೋಡೋ ಕಾರ್ಯಕ್ರಮ ಮುಗಿಸೋಣ, ನಮ್ಮ ಮಗನಿಗೆ ಗುರು ಬಲ ಕೂಡಿ ಬಂದಿದೆ ಎಂದು ಲೆಕ್ಕಾಹಾಕ್ಕಿದ್ದರು ಹುಡುಗನ ಮನೆಯವರು.
********************************************
ಚಲನಾ ಮಧ್ಯಮ ವರ್ಗದ ಮನೆಯ ಹೆಣ್ಣುಮಗು, ತಾನು ಬಯಸಿದ್ದೆಲ್ಲ ಕಾಲ ಕೆಳಗೆ ಬಂದು ಬೀಳದಿದ್ದರು, ಆಕೆಗೇನು ಕಡಿಮೆ ಮಾಡಿರಲಿಲ್ಲ ವಾಸುದೇವರಾಯರು. ಮಗಳನ್ನು ಕಣ್ರೆಪ್ಪೆಯಲ್ಲಿಟ್ಟುಕೊಂಡು ಸಾಕಿದ್ದರು. ಚಲನಾ ಕೂಡ ಚಟಪಟ ಮಾತಾಡುವ ಚುರುಕು ಹುಡುಗಿ. ವತ್ಸಲಾರವರಿಗೆ ಇವಳೆ ಪ್ರಪಂಚ. ಆದರೆ ಈ ಕುಟುಂಬಕ್ಕೆ ಒಂದೇ ಚಿಂತೆ ಚಲನಾಳ ಚಿತ್ರ ವಿಚಿತ್ರದ ಕನಸುಗಳದ್ದು. ಊಹೂ ಅವಳ ಜೀವನದ ಕನಸುಗಳಲ್ಲ,, ಕಾರಿರುಳ ಸ್ವಪ್ನಗಳು.
ಹಾ!!..ಚಲನಾಳಿಗೊಂದು ಅಭ್ಯಾಸ ರಾತ್ರಿ ನಿದ್ದೆಯಲ್ಲಿ ಮಾತಾಡುವುದು, ಕಿಟಾರನೆ ಕಿರುಚುವುದು. ಕನಸುಗಳಲ್ಲಿನ ಮಾತುಕತೆ ಕನವರಿಕೆಯಾಗಿ ಹೊರಬರುತ್ತಿತ್ತು.ಈಕೆಗೆ ದಾರಿಯಲ್ಲಿ ಕಂಡ ಅಪರಿಚಿತ ಯುವತಿ, ಬಿಎಂಟಿಸಿಯ ಕಂಡಕ್ಟರ್, ಎಷ್ಟೋ ವರ್ಷದ ಹಳೆಯ ಸಹಪಾಠಿ, ಪಾರ್ಕ್ ನಲ್ಲಿ ಆಡುತ್ತಿದ್ದ ಮಗು ಎಲ್ಲರೂ ಮತ್ತೊಮ್ಮೆ ಕನಸಿನಲ್ಲಿ ಭೇಟಿ ಮಾಡುತ್ತಾರೆ.ಕಂಡ ಕನಸುಗಳಲ್ಲಿ ಮೇಲು ಕೀಳೆಂಬ ಭೇದವಿಲ್ಲ, ಕಿರಿಯ ಹಿರಿಯನೆಂಬ ತಾರತಮ್ಯವಿಲ್ಲ.ಈಕೆಯ ಕನಸಿನಲ್ಲಿ, ಇವಳ ಮ್ಯಾನೇಜರ್ ಇವಳು ಕಂಡ ಭಿಕ್ಷುಕನಿಗೆ ಸ್ನೇಹಿತ, ಪಾರ್ಕಿನ ಚಿಕ್ಕ ಮಗು ಮತ್ಯಾವುದೋ ನಿಜ ಜೀವನದ ಪಾತ್ರದ ಮಗು..ಹೀಗೆ ಸಾಗಿತ್ತು ಚಲನಾಳ ಜೀವನ ಕನಸುಗಳ ಬೆನ್ನನ್ನೇರಿ.
ವಿಜ್ಞಾನದ ಪ್ರಕಾರ ಕನಸುಗಳು ನೆನಪಿನಲ್ಲುಳಿಯುವುದು ಬಹಳ ವಿರಳ. ಆದರೆ ಈಕೆಗ ಪ್ರತಿ ಕನಸು ಸ್ಮೃತಿ ಪಟಲದಲ್ಲಿ ಅಚ್ಚಾಗಿರುತ್ತಿತ್ತು ಮತ್ತು ಅದನ್ನು ಯಾರಿಗಾದರು ಹೇಳಬೇಕೆನ್ನುವ ತವಕ.
ಚಲನಾ ಕಾಲೇಜಿನಲ್ಲಿರುವಾಗ ಈಕೆಗೊಂದು ಕನಸು, ಆಕೆಯ ಕಾಲೇಜಿನ ಅಡ್ಮನ್ ಬ್ಲಾಕಿನಿಂದ ದೈತ್ಯಾಕಾರದ ಬಣ್ಣ ಬಣ್ಣದ ಇರುವೆಗಳು ಕೆಳಗಿಳಿದು ಬರುವಂತೆ.ಮತ್ತೊಮ್ಮೆ ತನಗೆ ಬಾಲ್ಯ ವಿವಾಹವಾದಂತೆ. ಇನ್ನೊಮ್ಮೆ ಕಪ್ಪೆಯೊಂದು ಕಚ್ಚಿದಂತೆ, ಮಗದೊಮ್ಮೆ ಜೇನೊಂದು ಚುಚ್ಚಿದಂತೆ. ತಲೆಯೊಳಗೆ ಚಿತ್ರ ವಿಚಿತ್ರ ಕತೆಗಳ ಸಿಡಿ ಪ್ಲೇ ಮಾಡಿಕೊಂಡು ಮಲ್ಗತಿದ್ದಳೇನೊ ಚಲನಾ ಎಂಬ ಅನುಮಾನ ಬರದೇ ಇರುತ್ತರಲಿಲ್ಲ ಇವಳ ಕನಸುಗಳ ಆಲಿಸುವರಲ್ಲಿ.
*******************************************
ಚಲನಾಳ ಅಗ್ನಿ ಪರೀಕ್ಷೆ ದಿನ, ತನ್ನ ನೋಡಲು ಗಂಡಿನ ಮನೆಯವರು ಬರ್ತಾರೆ ಅಂತ ಅಮ್ಮ ಹೇಳಿದಾಗಲಿಂದ ಇವಳ ಚಡಪಡಿಕೆ. ತನ್ನ ಕನಸಿನ ಭೂತವನ್ನ ಮನೆಯವರು ಲೆಕ್ಕಿಸದಿದ್ದರೂ, ಮದುವೆಯಾಗುವವನಿಗೆ ಇದೆಲ್ಲ ಹೇಳದಿದ್ದರೆ ದ್ರೋಹ ಮಾಡಿದಂತೆ ಎಂದು ನಂಬಿದ್ದಳು.
ಬಂದವರಿಗೆಲ್ಲ ಕಾಫಿ ಕೊಡಲು ಬಂದ ಚಲನಾಳ ಮನಸ್ಸೆಲ್ಲಾ ತನ್ನ ಕನಸುಗಳಲ್ಲಿ ಹೂತೋಗಿತ್ತು.ಇದೇ ಗುಂಗಲ್ಲಿದ್ದ ಆಕೆ ತನ್ನ ನೋಡಲು ಬಂದಿರುವ ಹುಡುಗ ಏನು ಕೆಲಸ ಮಾಡುತ್ತಾನೆ ಎಂದು ಕೇಳಿಲ್ಲವೆಂದು ಅರಿವಾದದ್ದು ಆತನ ಸ್ಥೆತಾಸ್ಕೋಪ್ ನೋಡಿದ ಮೇಲೆಯೇ!!!
ನನಗೆ ಹುಡುಗಿಯೊಂದಿಗೆ ಮಾತಾಡಲು ಅವಕಾಶ ಮಾಡಿಕೊಡಿ ಎಂದು ಸಮರ್ಥ್ ಮುಂದೆ ಬಂದಿದ್ದ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿದಬೇಕೆಂದುಕೊಂಡ ಚಲನಾ ಎಲ್ಲವನ್ನೂ ಹೇಳಿಯೇಬಿಡುವುದೆಂದು ನಿರ್ಧರಿಸಿದಳು.
ಸಮರ್ಥ್: ಹಾಯ್
ಚಲನಾ: ಹೆಲೋ
ಸ: ಮೇ ಐ ನೋ ಮೋರ್ ಅಬೋಟ್ ಯು?
ಚ: ಯಾ, ಅಫ್ಕೋರ್ಸ್!! ಐ ಆಮ್ ವರ್ಕಿಂಗ್ ಆಸ್ ಆ ರಿಸೆಪ್ಶಿನಿಸ್ಟ್ ಇನ್ ಆ ಟ್ರಾವೆಲ್ಲಿಂಗ್ ಏಜನ್ಸಿ.
ನನಗೆ ಕನಸುಗಳ ಖಾಯಿಲೆಯಿದೆ, ಇಂದಿನ ಕನಸಿನಲ್ಲಿ ನೀವು ಬಂದರು ಆಶ್ಚರ್ಯವೆನಿಲ್ಲ.
( ಮನೋವೈದ್ಯನಾದ ಸಮರ್ಥನಿಗೆ, ಅದು ಕನಸುಗಳ ಬಗ್ಗೆ ರಿಸರ್ಚ್ ಪೇಪರ್ ತಯಾರಿಸುತ್ತಿದ್ದ...ಹೆಂಡತಿಯ ಜೊತೆ ಒಂದು ಕೇಸ್ ಸ್ಟಡಿ ಕೇಸ್ ಕೂಡ ಸಿಗ್ತೂ ಅನ್ನೋ ಸಂಭ್ರಮ)
ಸಮರ್ಥ, ನೈಸ್ ಟು ಹಿಯರ್...ನಾನೊಬ್ಬ ಮನೋವೈದ್ಯನೆಂದಾಗ ತಬ್ಬಿಬ್ಬಾದಳು ಚಲನಾ. ನಾನು ವಿಚಿತ್ರನೆಂದರೆ ಇವ್ನಿಗ್ಯಾಕೆ ಖುಷಿ.🙄🙄
ಸ: ಕ್ಯನ್ಯೂ ಪ್ಲೀಸ್ ಎಕ್ಸ್ಪ್ಲೇನ್ ಮಿ ಅಬೋಟ್ ಯುವರ್ ಡ್ರೀಮ್ಸ್
ಚಲನಾ ತನ್ನೆಲ್ಲಾ ಕನಸುಗಳ(ಇರುವೆ, ಕಪ್ಪೆಯಿಂದ ಹಿಡಿದು ಮಹಿಷಾಸುರನ ನರಸಿಂಹನ ಕನಸುಗಳ ತನಕ) ಚಾಚುತಪ್ಪದೆ ಹೇಳಿದಳು.
ಸಮರ್ಥ ನಗುತ್ತಾ ಅವಳ ಅನುಮಾನಗಳಿಗೆ ಉತ್ತರಿಸಿದಾ "ಎಂತಾ ಮರಾಯ್ತಿ ಇದು ಖಾಯಿಲೆಯಲ್ಲ. ಕನಸಗಳು
ಸುಪ್ತ ಮನಸ್ಸಿನ ಸಂವೇದನೆ.ವೈಜ್ಞಾನಿಕವಾಗಿ ಹೇಳುವುದಾದರೆ ನಿದ್ರೆಯಲ್ಲಿ ನಮ್ಮ ದೈನಂದಿನ ಜೀವನದಲ್ಲಿ ನೆಡೆದ ಘಟನೆಗಳ ಕಲೆಹಾಕುವಿಕೆ. ಇನ್ನೂ ಒಂದು ಮೂಲದ ಪ್ರಕಾರ - interpreting random signals from the brain and body during sleep. ಅಂದರೆ ಮಿದುಳು ಯಾವುದೋ ಗೊತ್ತುಗುರಿಯಿಲ್ಲದ ಸೂಚನೆಗಳ ಪರಾಮರ್ಶಿಸಿವುದು, ಅವು ನಮಗೆ ದೃಶ್ಯ ರೂಪಕದಂತೆ ನಿದ್ರೆಯಲ್ಲಿ ಕಾಡುತ್ತವೆ."
ಹಾಗದರೆ ಆ ಇರುವೆಗೇನು ನನ್ನ ಮೆದುಳಲ್ಲಿ ಜಾಗ ಎಂದಳು ಸಣ್ಣ ಮಗುವಂತೆ.
ಸ: ನೀನು ಇರುವೆಗಳ ತುಂಬಾ ಸಮೀಪದಿಂದ ನೋಡಿರುತ್ತೀಯ. ಅದಲ್ಲದೆ antman ಎಂಬ ಕ್ಯಾರೆಕ್ಟರ್ ಬಗ್ಗೆ ಸುಪ್ತ ಮನಸ್ಸಿನಲೆಲ್ಲೋ ಉಳಿದಿರುತ್ತದೆ. ಇವೇ ನಿನಗೆ ಬಣ್ಣ ಬಣ್ಣದ ಹೊದಿಕೆ ಹೊದ್ದು ಕನಸುಗಳಂತೆ ಉರುಳಿವೆ ...ಹೆದರಬೇಡ!!!
ಇನ್ನೂ ಪಾರ್ಕಿನಲ್ಲಿ ನೋಡಿದ ಮಗು ನಿನಗೆ ತುಂಬಾ ಹತ್ತರವಾಗಿರುತ್ತೆ, ಬಸ್ಸಿನ ಕಂಡಕ್ಟರ್ ಅಂಕಲ್ ಆತ್ಮೀಯರು...ಸಬ್ ಕಾನ್ಶಿಯಸ್ ಮೈಂಡ್ ನಲ್ಲೆಲ್ಲೋ ದೊಡ್ಡ ಜಾಗವನ್ನೆ ಪಡೆದಿರುತ್ತಾರೆ ನೀನರಿಯದಂತೆ.
ಇದನ್ನೆಲ್ಲಾ ಬಹಳಾ ಸಹನೆಯಿಂದ ಅರ್ಥ ಮಾಡಿಸಿದ ಸಮರ್ಥ, ಸುಪ್ತ ಮನಸ್ದಿನೊಳಗೆ 30×40 ಸೈಟು ಖರೀದಿಸಿ ಪಾಯ ತೋಡಿದ್ದ.ಕನಸುಗಳ ಅಂತರಾಳವರಿತ ಚಲನಾಳ ಮನಸ್ಸು ನಿರಾಳವಾಗಿತ್ತು.
ಸಮರ್ಥ ಕೇಳಿಯೇ ಬಿಟ್ಟ, ಬಾಳಿಗೊಂದು ಸಂಗಾತಿ ಮತ್ತು ವೃತ್ತಿಗೊಂದು ಕೇಸ್ ಆಗುವೆಯಾ ಚಲನಾ ಎಂದು.😎
ನಮ್ಮ ಮದುವೆಗೆ 'ಕನಸುಗಳ ಬೆನ್ನನ್ನೇರಿ' ಎಂಬ ವೆಲಕಮ್ ಬೋರ್ಡ್ ಹಾಕ್ಸೋಣ ಅಂದ್ಲು ಚಲನಾ.
ಮರುದಿನ ಬೆಳಗ್ಗೆ:
(ಸಮರ್ಥನಿಗೆ ಅವಸರದಲ್ಲಿ ಫೋನಾಯಿಸಿದಳು ಎದ್ದ ಕೂಡಲೆ)
ಚ: ಸಮರ್ಥ್ ನಿನ್ನೆ ರಾತ್ರಿ ನನ್ನ ಕನಸಲ್ಲಿ ನಿಮ್ಮ ಕಸಿನ್ ಸಿದ್ದಾರ್ಥ್ ಬಂದಿದ್ದರು, ಅದೇ ನಿನ್ನೆ ನಮ್ಮನೆಗೆ ನಿಮ್ಮ ಜೊತೆ ಬಂದಿದ್ರಲಾ ಅವರು, ಪಾರ್ಕಿನಲ್ಲಿರುವಂತೆ ಕನಸು
ಸ: (ಕಾಲೆಳೆಯುತ್ತಾ)
ಏಯ್ ಕಳ್ಳಿ, ನನ್ನ ಬದಲು ಅವನಿಗೆ ಲೈನ್ ಹೊಡಿತಿದ್ಯಾ ನಿನ್ನೆ, ಅದ್ಕೆ ನಿನ್ನ ಸುಪ್ತ ಮನಸ್ಸಿನಿಂದ ಆ ಕನಸು ಬಂದಿದೆ.
(ಇಬ್ಬರು ಗಹಗಹಿಸಿ ನಗುತ್ತಾ)
ಸ: ಇಷ್ಟೇ ನೋಡು ಕನಸಿನ ಮರ್ಮ.😂