ಕಾಫಿ ತವರು- ಚಿಕ್ಕಮಗಳೂರು
ಅಂತರಾಷ್ಟ್ರೀಯ ಕಾಫಿ ದಿನದಂದು, ಆ ಊರು ಎಡಬಿಡದೆ ಕಾಡುತ್ತಿದೆ. ಕಾಫಿನಾಡು ಎಂದೇ ಪ್ರಸಿದ್ಧಿ ಹೊಂದಿರುವ ಚಿಕ್ಕಮಗಳೂರಲ್ಲಿ, ಸ್ವಲ್ಪ ವರ್ಷ ಕಾಲ ಕಳೆದೋಳು ನಾನು ಎನ್ನುವುದೇ ಖುಷಿ.
ಎಂದಿನಂತೆ ಫೇಸ್‌ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ಜಾಲಾಡುತ್ತಿದ್ದೆ, ಎಲ್ಲರ ಸ್ಟೇಟಸ್ನಲ್ಲೂ #InternationalCoffeeDay ಪೋಸ್ಟ್ಸ್ ಇತ್ತು. ಅದನ್ನೆಲ್ಲಾ ನೋಡ್ತಾ ನನ್ನ ಮನಸ್ಸು ಅದಾಗಲೇ ಚಿಕ್ಕಮಗಳೂರಿಗೆ ಜಿಗಿದಿತ್ತು. ಅಲ್ಲಿ ನಾನು ಕಳೆದದ್ದು 4 ವರ್ಷಗಳಾದರು, ನಾನೂರು ನೆನಪು ಅಚ್ಚಳಿಯದೆ ಬೇರೂರಿದೆ. ಎಡಬಿಡದೆ ಹೊಯ್ಯುವ ಮಳೆರಾಯ, ಸುಂದರ ಪ್ರಕೃತಿ, ಬಿಸಿ ಬಿಸಿ ಕಾಫಿ...ಸ್ವರ್ಗ ಪಕ್ಕದಲ್ಲೇ ಇದ್ದಂತಹ ದಿನಗಳವು. ನಾನು ಹಾಸ್ಟೆಲ್ನಲ್ಲಿದ್ದ ಕಾರಣ, ನಮ್ಮ ಹಾಸ್ಟೆಲ್ ಕಾಫಿ ಬಗ್ಗೆ ಹೇಳಲೇಬೇಕು. ಅಲ್ಲಿನ ಅಡುಗೆ ಭಟ್ಟರು ಮಾಡುತ್ತಿದ ಕಾಫಿ ಅಮೃತ.
ದಿನವೂ ಬೆಳಿಗ್ಗೆ ಬೇಗನೆ ಕಾಲೇಜಿನ ಕ್ಲಾಸ್ ಆರಂಭವಾಗುತ್ತಿದ್ದರಿಂದ, ಆ ಚಳಿಗೆ ಕಾಫಿ ಬೇಕೇಬೇಕು. ಒಂದು ಪಕ್ಷ ತಿಂಡಿ ಇಲ್ಲದಿದ್ದರೂ ನೆ
ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿವ ಮಳೆ, ಅಂದು ಕಾಫಿ ಹೀರುತ್ತಾ ಓದಿದ ಪುಸ್ತಕ, ನೋಡಿದ ಸಿನಿಮಾ, ಓಡಾಡಿದ ಬೀದಿ ಎಲ್ಲಾ ಕಾಡುವಂತೆ ಮಾಡಿದೆ. ಈಗಲೂ ಕಾಫಿ ಹಿಡಿದು ಕೂತರೆ ಕಡಲ ಭೋರ್ಗರೆತದಂತ ಯೋಚನೆಗಳು, ದ್ವಂದ್ವದ ಚೀರಾಟ, ಮನಸ್ಸಿನ ದುಗುಡವೆಲ್ಲಾ ಹಾರಿಹೋದಂತೆನಿಸುತ್ತದೆ.
ಕೆಲವು ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸೋದು ಕಷ್ಟ.ಬಿತ್ತರಿಸಿದಷ್ಟು ವಿಸ್ತಾರವಾಗುವ ಅಂತಹ ಭಾವದ ತುಣಕೊಂದನ್ನು ಮಾತ್ರ ಇಲ್ಲಿ ಬರೆದಿರೋದು.
#ವಿಶ್ವಕಾಫಿದಿನ