Saturday, 29 July 2017

ಬಿಟ್ಟೆನೆಂದರು ಬಿಡದೀ ಮಾಯೆ!!!


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳು ದೇಹವೊ||
ಎಂಬ ಕನಕದಾಸರ ರಚನೆ ಕೇಳಿರುತ್ತೀರಿ.
    ಹೌದು, ನೀವು ಈ ಮಾಯಂಗನೆಯ ಜಾಲದಲ್ಲಿ ಸಿಲುಕಿರಬಹುದು.ಬಹುಶಃ ಮೋಜಿನ ಅಮಲಿನಲ್ಲಿರಬಹುದು ಅಥವಾ ಜಾಲದಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿರಬಹುದು.ಈ ಮಾಯಾಂಗನೆ ಯಾರು?ಯಾವುದೀ ಮಾಯೆ ಎಂದು ಯೋಚಿಸುತ್ತೀದ್ದೀರ?ಅದೇ ಅಂತರ್ಜಾಲ(Internet). ಈ ಅಂತರ್ಜಾಲದಿಂದ ಉಪಕಾರದಷ್ಟೆ ಉಪದ್ರವ.
      ಬೆರಳಂಚಿನಲ್ಲೇ ಜಗತ್ತನ್ನು ಕಾಣುವ ,ಬದಲಿಸುವ ಈ ಯುಗದಲ್ಲಿ , ಮಾಯಂಗನೆಯ ಪಾತ್ರ ಮಹತ್ವದ್ದು.ಈಗಿನ ಪರಿಸ್ಥಿತಿ ಹೇಗಿದೆಯೆಂದರೆ,ನಮ್ಮ ಪ್ರತಿ ಹೆಜ್ಜೆಯೊಂದಿಗೂ ಮಾಯಂಗನೆ ನಮ್ಮೊಂದಿಗಿರುತ್ತಾಳೆ.ಬೆಳಗ್ಗಿನ ದೈನಂದಿನ ಸುದ್ದಿ ಪತ್ರಿಕೆ ಓದುವುದುರಿಂದ ಪ್ರಾರಂಭವಾಗಿ, ಮನೋರಂಜನೆಯ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್,ಇನ್ಸ್ಟಗ್ರಾಮ್ ನಲ್ಲಿ ಮಿಂದೇಳುವುದು,ಅಗತ್ಯ ವಸ್ತುಗಳ ಖರೀದಿ, ಮೊಬೈಲ್ ರೀಚಾರ್ಜ್.....ಅಷ್ಟೇ ಏಕೆ ಬ್ಯಾಂಕಿನ ವ್ಯವಹಾರ ಎಲ್ಲವೂ ಇವಳ ದಯೇ!!
      ಈಗ ಇನ್ನೊಂದು ದೃಷ್ಟಿಕೋನದಿಂದ ಯೋಚಿಸೋಣ.
ಕ್ಷಣಮಾತ್ರದಲ್ಲೇ , ಕೂತಲ್ಲಿಯೇ ಕೆಲಸಗಳನ್ನು ಮಾಯಂಗನೆಯ ಸಹಾಯದಿಂದ ಮುಗಿಸುತ್ತಿರುವುದರಿಂದ ಜನ ಸೋಮಾರಿಗಳಾಗುತ್ತಿದ್ದಾರೆ.ಅದಲ್ಲದೆ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್......ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದೆ.ಈ ಪೀಳಿಗೆಯ ಮಕ್ಕಳು ಹೊರಗೆ ಆಟ ಆಡುವುದನ್ನೆ ಮರೆತಿದ್ದಾರೆ,ಇದು ಮಾಯಂಗನೆಯ ಮಹಿಮೆ!!!
ಈ ಮಾಯಂಗನೆಯ ಸಮಕಾಲೀನವಾಗಿ ಬಂದ ಜಾಲತಾಣಗಳಿಂದ, ಮನುಷ್ಯ ಮನುಷ್ಯರ ನಡುವಿನ ನೇರ ಸಂವಹನ ಇನ್ನಿಲ್ಲದಂತಾಗಿದೆ.ಹಿಂದೆ ಕುಟುಂಬದವರೆಲ್ಲ ಕೂತು ಹರುಟುತ್ತಿದ್ದ ದಿನಗಳು ಅಳಿಸಿ ಹೋಗಿವೆ.
   ಇಷ್ಟೆಲ್ಲ ಅನಾನುಕೂಲತೆಗಳ ಮಧ್ಯವು ,ಮಾಯಂಗನೆ ನಮ್ಮನ್ನು ಬಿಡುವುದಿಲ್ಲ, ನಾವೆ ಮಾಯಂಗನೆಯ ಜಾಲದಿಂದ ಹೊರಬರುವೆನೆಂದುಕೊಂಡರು ಆಕೆ ನಮ್ಮನ್ನು ತೊರೆಯುವುದಿಲ್ಲ.ಅದೇ "ಬಿಟ್ಟೆನೆಂದರು ಬಿಡದೀ ಮಾಯೆ!!! " ಮಾಯಂಗನೆ ನಮ್ಮನ್ನು ಹೇಗೆ   ಸೆರೆ ಹಿಡಿದಿದ್ದಾಳೆಂದರೆ ,ಅಂದಾಜು  ಒಂದು ವರ್ಷದ  ಕೆಳಗೆ ಪ್ರತಿ ತಿಂಗಳಗೆ 1 ಜಿಬಿ ಇಂಟರ್ನೆಟ್ ಡಾಟ ಬಳಸುತ್ತಿದ್ದ ಜನ ,ಈಗ ದಿನಕ್ಕೆ 1 ರಿಂದ 1.5 ಜಿಬಿ ಡಾಟ ಬಳಸುವಂತಾಗಿದೆ( ವಾಸ್ತವದಲ್ಲಿ ಅದು ಸಾಲದಂತಾಗಿದೆ).ಇದಲ್ಲವೆ ಬದಲಾವಣೆ ಅಥವಾ ಪರಿವರ್ತನೆ .ನಿಜ "ಪರಿವರ್ತನೆ ಜಗದ ನಿಯಮ".
       ಈ ಪರಿವರ್ತನೆಯ ನಡುವೆ ನಮ್ಮವರಿಗೆಂದು ಸ್ವಲ್ಪ ಸಮಯ ಮೀಸಲಿಡೋಣ,ನಮ್ಮ ಹವ್ಯಾಸಗಳನ್ನು ಮರೆಯದಿರೋಣ,ಮುಖ್ಯವಾಗಿ ವಾಸ್ತವಿಕ ಪ್ರಪಂಚದಲ್ಲಿ ಮನುಷ್ಯರೊಡನೆ ಸಂವಹಿಸೋಣ......
    
    

/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನ...